ಸಿದ್ದರಾಮಯ್ಯನವರ ಸರಕಾರದ ಯುವ ಸಚಿವರಲ್ಲಿ ಕೃಷ್ಣ ಭೈರೇಗೌಡ ಕೂಡಾ ಒಬ್ಬರು. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸುತ್ತಿರುವ ಕೃಷ್ಣ ಭೈರೇಗೌಡ, ಹಾಲೀ ಕೃಷಿ ಸಚಿವರೂ ಕೂಡಾ. ಜಿಎಸ್ಟಿ ಕೌನ್ಸಿಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೃಷ್ಣ ಭೈರೇಗೌಡ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ ಎಚ್ ಪಟೇಲ್ ಅವಧಿಯಲ್ಲಿ ಸಚಿವರಾಗಿದ್ದ ಮತ್ತು ವೇಮಗಲ್ ಕ್ಷೇತ್ರದ ಶಾಸಕರಾಗಿದ್ದ ಸಿ ಭೈರೇಗೌಡರ ಪುತ್ರ.